ಜಿಲ್ಲಾ ಕೇಂದ್ರ ಗ್ರಂಥಾಲಯ
ಇಲಾಖೆಯ ಬಗ್ಗೆ
ಸಾರ್ವಜನಿಕ ಗ್ರಂಥಾಲಯ ಒಂದು ಮುಕ್ತವಾದ ಸಾರ್ವಜನಿಕ ಸಂಸ್ಥೆ. ಸಾರ್ವಜನಿಕ ಗ್ರಂಥಾಲಯ ಶ್ರೀ ಸಾಮಾನ್ಯನ ವಿಶ್ವವಿದ್ಯಾಲಯ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಸರ್ಕಾರ ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ ಓದಿನ ಬಗೆಗೆ ಅಭಿರುಚಿ ಮುಂತಾದವುಗಳನ್ನು ಬೆಳೆಸಲು ಉದ್ದೇಶಿಸಿ ಸ್ಥಾಪನೆ ಮಾಡಿದ ಮುಕ್ತ ಸಾರ್ವಜನಿಕ ವ್ಯವಸ್ಥೆಯೇ ಈ ಗ್ರಂಥಾಲಯಗಳು ಕರ್ನಾಟಕ ಸರ್ಕಾರ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು. ನಮ್ಮ ರಾಜ್ಯ ಇಡೀ ಭಾರತದಲ್ಲಿಯೇ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯ ದೃಷ್ಟಿಯಿಂದ ಮಂಚೂಣಿಯಲ್ಲಿರುವ ರಾಜ್ಯವಾಗಿದೆ.
ಇಲಾಖೆಯ ಚಟುವಟಿಕೆಗಳು
ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ರಾಜ್ಯದಲ್ಲಿ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದೆ. ರಾಜ್ಯ ಮಟ್ಟದಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಒಂದು ಲಕ್ಷ ಜನ ಸಂಖ್ಯೆಗಿಂತ ಹೆಚ್ಚಿನ ಜನ ಸಂಖ್ಯೆ ಹೊಂದಿದ ಪ್ರತಿಯೊಂದು ನಗರದಲ್ಲಿ ನಗರ ಕೇಂದ್ರ ಗ್ರಂಥಾಲಯ, ತಾಲ್ಲೂಕು ಕೇಂದ್ರ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳು ಕಾರ್ಯನಿರತವಾಗಿವೆ. ರಾಜ್ಯದ ಜನತೆಗೆ ಜ್ಞಾನ, ಸಾಮಾಜಿಕ ಶಿಕ್ಞಣ, ಮಾಹಿತಿ ಪ್ರಸಾರ ಹಾಗೂ ನಿರಂತರ ಕಲಿಕೆಗೆ ಒತ್ತಾಸೆ ನೀಡಿ ಸಾರ್ವಜನಿಕರಿಗೆ ಓದುವ ಸೌಲಭ್ಯ ಒದಗಿಸಿ ಅವರ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಲು ಜೀವ0ತ ಶಕ್ತಿಯಾಗಿ ಈ ವ್ಯವಸ್ಥೆ ಸಮಾಜಕ್ಕೆ ಸೇವೆ ಸಲ್ಲಿಸುತ್ತ್ತಿದೆ.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
ಡಿಜಿಟಲ್ ಲೈಬ್ರರಿ :
- ಸಾರ್ವಜನಿಕ ಗ್ರಂಥಾಲಯಗಳ ಮರು ವ್ಯಾಖ್ಯಾನ
- ಸ್ವಯಂ ಕಲಿಕೆಯ ಸೌಲಭ್ಯವನ್ನು ನೀಡುವ ಮೂಲಕ ಓದುಗರ ಭವಿಷ್ಯವನ್ನು ರೂಪಿಸುವುದು
- ವೈವಿಧ್ಯಮಯ ವಿಷಯಗಳ (ಇ-ಪುಸ್ತಕಗಳು, ನಿಯತಕಾಲಿಕಗಳು, ವೀಡಿಯೊಗಳು, ಸಿಮ್ಯುಲೇಶನ್‌ಗಳು, ಮೌಲ್ಯಮಾಪನಗಳು) ಲೋಕಕ್ಕೆ ಪ್ರವೇಶ
- ಬಹು ಭಾಷಾ ಡಿಜಿಟಲ್ ಸಂಕಲನ – ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು
- ತಂತ್ರಜ್ಞಾನದ ಮೂಲಸೌಕರ್ಯಗಳ ಉನ್ನತೀಕರಣ