ಮುಚ್ಚಿ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆ ಕೆ ಆರ್ ಟಿ ಸಿ)

ಇಲಾಖೆಯ ಬಗ್ಗೆ

ಕಾರ್ಯಾಚರಣೆಯ ಧಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸಾರಿಗೆ ಸೇವೆಯನ್ನು ಒದಗಿಸಲು ಅದರಲ್ಲೂ ಕರ್ನಾಟಕ ರಾಜ್ಯ ರಾಯಚೂರು ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕ, ಪರಿಣಾಮಕಾರಿ, ವಿಶ್ವಾಸಾರ್ಹ ಹಾಗೂ ಸಾರಿಗೆ ಸೌಲಭ್ಯವನ್ನು ಒದಗಿಸಲು 1973ರಲ್ಲಿ ರಾಯಚೂರು ವಿಭಾಗವನ್ನು ಸ್ಥಾಪಿಸಲಾಯಿತು. ಪ್ರಸ್ತುತ ರಾಯಚೂರು ವಿಭಾಗವು ರಾಯಚೂರಿನಲ್ಲಿ ವಿಭಾಗೀಯ ಕಛೇರಿಯನ್ನು ಹೊಂದಿದ್ದು, 07 ಘಟಕಗಳು, 14 ಬಸ್ ನಿಲ್ದಾಣ, 80 ರಸ್ತೆ ಮಾರ್ಗದ ಷೆಲ್ಟರ್ ಗಳನ್ನು ಹೊಂದಿರುತ್ತದೆ. ರಾಯಚೂರಿನಲ್ಲಿ ವಿಭಾಗೀಯ ಕಾರ್ಯಗಾರ ಹೊಂದಿರುತ್ತವೆ. ಪ್ರಸ್ತುತ 646 ವಾಹನಗಳಿಂದ 2808 ಉದ್ಯಗಿಗಳನ್ನು ಹೊಂದಿದ್ದು, ದಿನಕ್ಕೆ 591 ಅನುಸೂಚಿಗಳೊಂದಿಗೆ 2.07 ಲಕ್ಷ ಕಿ/ಮೀಗಳನ್ನು ಕ್ರಮಿಸಿ 02 ಲಕ್ಷ ಪ್ರಯಾಣಿಕರ ನ್ನುಸಾಗಿಸಲಾಗುತ್ತಿದೆ.

ಇಲಾಖೆಯ ಚಟುವಟಿಕೆಗಳು

ಸಾರ್ವಜನಿಕರ ಪ್ರಯಾಣೀಕರ ಅನುಕೂಲಕ್ಕಾಗಿ 24*7 ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರಿಗೆ ಮದುವೆ ಮುಂಜಿ ಇನ್ನೀತರ ಸಮಾರಂಭಗಳಿಗೆ ಸಾಂಧರ್ಬಿಕ ಗುತ್ತಿಗೆ ಆಧಾರದ ಮೇಲೆ ಮತ್ತು ಶೈಕ್ಷಣಿಕ ಹಾಗೂ ಕೈಗಾರಿಕೆ ಮತ್ತು ಇನ್ನೀತರೆ ಸಂಸ್ಥೆ/ಸಂಘಗಳ ಪ್ರತ್ಯೇಕವಾಗಿ ಬಸ್ ಸೌಕರ್ಯ ಕೋರಿದ್ದಲ್ಲಿ ಚಾರ್ಟೆಡ್ ಆಧಾರದ ಮೇಲೆ ಬಸ್ಸುಗಳನ್ನು ಒದಗಿಸಲಾಗುವುದು ಹಾಗೂ ದೈನಿಕ ಮಾಸಿಕ ಪಾಸ್ ಗಳನ್ನು ನೀಡಲಾಗುತ್ತಿದೆ.ಅಲ್ಲದೇ ವಿಧ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಗಳನ್ನು ನೀಡಲಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ. ಇದಲ್ಲದೇ ವಾಣಿಜ್ಯ ಮಳಿಗೆಗಳನ್ನು ಇ-ಟೆಂಡರ್ ಮೂಲಕ ಅರ್ಹ ಆಯ್ಕೆದಾರರಿಗೆ ಬಾಡಿಗೆ ದರದಲ್ಲಿ ನೀಡಲಾಗುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಅಂದರು, ಅಂಗವಿಕಲರು, ಸ್ವಾತಂತ್ರ ಹೋರಾಟಗಾರರು ಮತ್ತು ಸ್ವಾತಂತ್ರ ಹೋರಾಟಗಾರರ ವಿಧವಾ ಪತ್ನಿಯರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ.

ವೆಬ್‌ಸೈಟ್ : https://kkrtc.karnataka.gov.in/