ಮುಚ್ಚಿ

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಇಲಾಖೆಯ ಬಗ್ಗೆ

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮುಸ್ಲಿಂ, ಕ್ರಿಶ್ಚಿಯನ್ನರು, ಜೈನರು, ಬೌದ್ಧ, ಸಿಖ್ಖರು ಮತ್ತು ಪಾರ್ಸಿಗಳು ಎಂಬ ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವ ಹಾಗೂ ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಜನರು ಸಾಮಾಜಿಕ, ಆರ್ಥಿಕ, ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳೊಂದಿಗೆ ಉತ್ಪಾದಕ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡುವ ಕಾರ್ಯನಿರ್ವಹಿಸುತ್ತಿದ್ದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆದೇಶವು ಅಲ್ಪಸಂಖ್ಯಾತ ಸಮುದಾಯದ ಯೋಜನಾ ಸಮನ್ವಯ, ಮೌಲ್ಯಮಾಪನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಯೋಜನಕ್ಕಾಗಿ ಒಳಗೊಂಡಿದೆ. ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಯೋಜನೆಗಳನ್ನು ಪರಿಚಯಿಸುವುದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಿಯಾಯಿತಿಗಳನ್ನು ಪರಿಚಯಿಸುವುದು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಯೋಜನೆಯನ್ನು ಜಾರಿಗೆ ತರುವುದು, ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು, ಅಲ್ಪಸಂಖ್ಯಾತರಲ್ಲಿ ಆರ್ಥಿಕ ಹಿಂದುಳಿದ ಸಮಸ್ಯೆಗಳನ್ನು ನಿಭಾಯಿಸುವುದು ಇಲಾಖೆಯ ಮುಖ್ಯ ಕಾರ್ಯ.

ಇಲಾಖೆಯ ಚಟುವಟಿಕೆಗಳು

  • ವಸತಿ ನಿಲಯಗಳ ನಿರ್ವಹಣೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಮಾದರಿ ಶಾಲೆ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜ್ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳ ನಿರ್ವಹಣೆ
  • ಎನ್.ಎಸ್.ಪಿ & ಎಸ್.ಎಸ್. ಪಿ, ವಿದ್ಯಾರ್ಥಿ ವತೇನ
  • ಎಂ.ಫಿಲ್ & ಪಿ.ಹೆಚ್.ಡಿ ಪ್ರೋತ್ಸಾಹ ಧನ
  • ಡಿ.ಎಡ್ ಮತ್ತು ಬಿ.ಎಡ್ ಪ್ರೋತ್ಸಾಹಧನ
  • ವಿದ್ಯಾಸಿರಿ
  • ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಕೆ.ಎ.ಎಸ್ ಮತ್ತು ಐ.ಎ.ಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳ ತರಬೇತಿ

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಮಾನ್ಯ ಮುಖ್ಯ ಮಂತ್ರಿಗಳ ಅಭಿವೃದ್ಧಿ ಯೋಜನೆ
  • ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆ
  • ಶಾದಿಮಹಲ್/ಸಮುದಾಯ ಭವನ
  • ಮದರಸಾಗಳ ಆಧುನೀಕರಣ
  • ಬಹುವಲಯವಾರು ಅಭಿವೃದ್ಧಿ ಯೋಜನೆ
  • ವಿಶೇಷ ಅಭಿವೃದ್ಧಿ ಯೋಜನೆ
  • ಜೈನ್/ಸಿಖ್ ಅಭಿವೃದ್ಧಿ ಯೋಜನೆ

    ಜಾಲತಾಣ:  https://dom.karnataka.gov.in/