ಮುಚ್ಚಿ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ (ಸಾಮಾಜಿಕ ಅರಣ್ಯ ವಿಭಾಗ)

ಇಲಾಖೆಯ ಬಗ್ಗೆ

ಸಾಮಾಜಿಕ ಅರಣ್ಯ ರಾಯಚೂರು ವಿಭಾಗವು ಜಿಲ್ಲಾ ಪಂಚಾಯತ ರಾಯಚೂರು ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಎಲ್ಲಾ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಜಿಲ್ಲಾ ಪಂಚಾಯತನಿಂದ ಹಾಗೂ ತಾಂತ್ರಿಕ ಮಂಜೂರಾತಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಲಬುರಗಿ ವೃತ್ತ, ಕಲಬುರಗಿ ರವರಿಂದ ಪಡೆಯಬೇಕಾಗಿರುತ್ತದೆ. ಸಾಮಾಜಿಕ ಅರಣ್ಯ ವಿಭಾಗದ ಚಟುವಟಿಕೆಗಳೆಂದರೆ ಗೋಮಾಳ, ರಸ್ತೆಬದಿ, ರೈತರ ಜಮೀನುಗಳಲ್ಲಿ ಅರಣ್ಯೀಕರಣ ಮಾಡುವುದು ಮುಖ್ಯ ಕೆಲಸವಾಗಿರುತ್ತದೆ.

ಇಲಾಖೆಯ ಚಟುವಟಿಕೆಗಳು

2020-21 ನೇ ಸಾಲಿನಲ್ಲಿ ರಾಯಚೂರು ಸಾಮಾಜಿಕ ಅರಣ್ಯ ವಿಭಾಗದಿಂದ ಈ ಕೆಳಕಂಡ ಯೋಜನೆಗಳಲ್ಲಿ ಅರಣ್ಯೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ :

  • ಸಾಮಾಜಿಕ ಅರಣ್ಯ ಯೋಜನೆಯಡಿ 267.00 ಹೆಕ್ಟೇರ ನೆಡುತೋಪು ಬೆಳೆಸುವ ಗುರಿಯನ್ನು ಹೊಂದಿದ್ದು, ಜುಲೈ-2020 ರ ಅಂತ್ಯಕ್ಕೆ ಸಂಪೂರ್ಣ ಪ್ರಗತಿ ಸಾಧಿಸಲಾಗಿದೆ.
  • ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿ 1080 ಹೆ. ನೆಡುತೋಪು ಬೆಳೆಸಿ 3.256 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿಯನ್ನು ಹೊಂದಿದ್ದು, ಜುಲೈ-2020 ರ ಅಂತ್ಯಕ್ಕೆ 306.50 ಹೆ. ನೆಡುತೋಪು ಬೆಳೆಸಿ 0.943 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.
  • ಎಸ್.ಎಂ.ಎ.ಎಫ್. ಯೋಜನೆಯಡಿ 30400 ಸಸಿಗಳನ್ನು ರೈತರ ಜಮೀನುಗಳಲ್ಲಿ ನೆಡಲು ಗುರಿಯನ್ನು ಹೊಂದಲಾಗಿದೆ. ಕೆಲಸ ಪ್ರಗತಿಯಲ್ಲಿದೆ.
  • ನಗರ ಪ್ರದೇಶ ಹಸರೀಕರಣ (ಜಿಯುಎ) ಯೋಜನೆಯಡಿ ರಾಯಚೂರು ಮತ್ತು ಲಿಂಗಸುಗೂರು ತಾಲೂಕುಗಳಲ್ಲಿ ತಲಾ 900 ಸಸಿಗಳಂತೆ 1800 ಸಸಿಗಳನ್ನು ನಾಟಿ ಮಾಡಲಾಗಿದೆ.
  • ಆರ್.ಎಸ್.ಪಿ.ಡಿ. ಮತ್ತು ಹಸಿರು ಕರ್ನಾಟಕ ಯೋಜನೆಯಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಲು 1.80 ಲಕ್ಷ ಸಸಿಗಳ ಗುರಿಯನ್ನು ಹೊಂದಿದ್ದು, ಜುಲೈ-2020 ರ ಅಂತ್ಯಕ್ಕೆ 0.789 ಲಕ್ಷ ಸಸಿಗಳನ್ನು ವಿತರಿಸಲಾಗಿದೆ.
  • ಪ್ರಸಕ್ತ ಸಾಲಿನಲ್ಲಿ ಎಂಜಿನರೇಗಾ ಯೋಜನೆಯಡಿ ಒಂದು ತಾಲೂಕಿಗೆ 1.00 ಲಕ್ಷ ಸಸಿಗಳಂತೆ ಒಟ್ಟು ಏಳು ತಾಲೂಕುಗಳಿಗೆ 7.00 ಲಕ್ಷ ಸಸಿಗಳನ್ನು ಬೆಳೆಸಲು ಗುರಿಯನ್ನು ಹೊಂದಲಾಗಿದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಸಾಮಾಜಿಕ ಅರಣ್ಯ ಯೋಜನೆ,
  • ಆರ್.ಎಸ್.ಪಿ.ಡಿ.,
  • ಹಸಿರು ಕರ್ನಾಟಕ,
  • ಎಸ್.ಎಂ.ಎ.ಎಫ್.
  • ಎಂ.ಜಿ.ಎನ್.ಆರ್.ಇ.ಜಿ.ಎ.