ಮುಚ್ಚಿ

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ

ಇಲಾಖೆಯ ಬಗ್ಗೆ

ಈ ಕಛೇರಿಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಡಿ ಕಾರ್ಯ  ನಿರ್ವಹಿಸುತ್ತದೆ.

ಇಲಾಖೆಯ ಚಟುವಟಿಕೆಗಳು

  • ನೊಂದಣಿ:- 18 ರಿಂದ 35 ವಷ ಗಳ ನಿರುದ್ಯೋಗಿ ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ನೊಂದಣಿ , ಮರು ನೊಂದಣಿ  ಹಾಗೂ ಮೂರು ವರ್ಷಗಳಿಗೊಮ್ಮೆ ನವಿಕರಣ ಮಾಡುವುದು.
  • ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ:- ನಿರುದ್ಯೋಗಿ ಅಭ್ಯರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ ನೀಡುವುದು ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ವೃತ್ತಿ ಉಪನ್ಯಾಸ ಮತ್ತು ಸಮ್ಮೇಳನಗಳನ್ನು ಏರ್ಪಡಿಸುವುದು
  • ಪುರಸ್ಕರಣೆ:- ಯಾವುದೇ ಇಲಾಖೆಯ ತನ್ನ ಯಾವುದೇ ಹುದ್ದೆಗಳಿಗೆ ಈ ಕಛೇರಿ ಅಧಿಸೂಚನೆ ಮಾಡಿದರೆ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ನೊಂದಣಿ ಜೇಷ್ಠತೆ ಮೇಲೆ ಪುರಸ್ಕರಿಸಲಾಗುವುದು.
  • ಉದ್ಯೋಗ ಮಾರುಕಟ್ಟೆ ವಿಭಾಗ:- ಎಲ್ಲಾ ಕೇಂದ್ರ ಸರ್ಕಾರಿ, ಅರೇ ಕೇಂದ್ರ, ರಾಜ್ಯ ಸರ್ಕಾರಿ, ಅರೇ ರಾಜ್ಯ, ಸ್ಥಳಿಯ, ಖಾಸಗಿ ಅಧಿಸೂಚಿತ ಮತ್ತು ಖಾಸಗಿ ಅನ ಅಧಿಸೂಚಿತ ಸಂಸ್ಥೆಗಳಿಂದ ಪ್ರತಿ ತ್ರೈಮಾಸಿಕಕ್ಕೊಮ್ಮೆ, ಉದ್ಯೋಗಿಗಳ ವಿವರಗಳನ್ನು ನಿಗಧಿತ ಇ.ಆರ್-1 ನಮೂನೆಗಳಲ್ಲಿ ಪಡೆದು, ಕ್ರೂಢಿಕರಿಸಿ ನಿರ್ದೇಶನಾಲಯಕ್ಕೆ ಮತ್ತು ಯೋಜನೆ ಇಲಾಖೆಗೆ ಕಳುಹಿಸುವುದು.
  • ಸ್ಟಡಿ ಸರ್ಕಲ್:- ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಕೆ.ಪಿ.ಎಸ್.ಸಿ ಹಾಗೂ ಇತರೇ ಪ್ರಾಧಿಕಾರಗಳು ಅಧಿಸೂಚಿಸಿದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡುವುದು.
  • ಉದ್ಯೋಗ ಮೇಳ :- ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ನಿಯಮಿತವಾಗಿ ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸಿ ಉದ್ಯೋಗ ಮೇಳಗಳನ್ನು ಏರ್ಪಡಿಸುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

     https://www.ncs.gov.in