ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಇಲಾಖೆಯ ಬಗ್ಗೆ
ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರು ಕಛೇರಿಯ ಮುಖ್ಯಸ್ಥರಾಗಿರುತ್ತಾರೆ, ಉಪ ವಿಭಾಗ ಮಟ್ಟದಲ್ಲಿ ಸಹಾಯಕ ನಿರ್ದೇಶಕರು, ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಹಾಗೂ ತಾಲ್ಲೂಕು ಮಟ್ಟದಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿಗಳು ಮುಖ್ಯಸ್ಥರಾಗಿದ್ದು ಇವರು ಉಪ ನಿರ್ದೇಶಕರು(ಖಾಗ್ರಾ) ಜಿಲ್ಲಾ ಪಂಚಾಯತ್ ರಾಯಚೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಇಲಾಖೆಯ ಚಟುವಟಿಕೆಗಳು
ಈ ಇಲಾಖೆಯಿಂದ ವಿವಿಧ ಕೈಗಾರಿಕೆಗಳಿಗೆ ಕೈಗಾರಿಕಾ ನೀತಿ ಹಾಗೂ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ನೀತಿ-2015ರ ಪ್ರಕಾರ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತದೆ.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
- ಬಂಡವಾಲ ಹೂಡಿಕೆ ಸಹಾಯಧನವನ್ನು ಕೈಗಾರಿಕಾ ನೀತಿಯ ಪ್ರಕಾರ ಹಾಗೂ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ 2015ರ ಪ್ರಕಾರ ನೀಡಲಾಗುತ್ತದೆ.
- ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ನೀತಿಯ ಪ್ರಕಾರ ಕೃಷಿ ಆಧಾರಿತ ಕೈಗಾರಿಕಾ ಘಟಕಗಳಿಗೆ ಎಪಿಎಂಸಿ ಸೆಸ್ ವಿನಾಯಿತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
- ಮುದ್ರಾಂಕ ಶುಲ್ಕ ವಿನಾಯಿತಿ ಪತ್ರವನ್ನು ಭೂಮಿ ನೋಂದಣಿ ಸಲುವಾಗಿ ವಿನಾಯಿತಿ ಪತ್ರವನ್ನು ನೀಡಲಾಗುತ್ತದೆ. ಹಾಗೂ ಸಾಲದ ಅಡಮಾನ ಪತ್ರಗಳ ನೋಂದಣಿ ಸಲುವಾಗಿ ಕೂಡ ಮುದ್ರಾಂಕ ಶುಲ್ಕ ವಿನಾಯಿತಿ ಪತ್ರವನ್ನು ನೀಡಲಾಗುತ್ತದೆ.
- ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿ ಮಾಡಿದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆಗಾಗಿ ಸಂದಾಯ ಮಾಡಿದ ಫಿಯನ್ನು ಕೈಗಾರಿಕಾ ಪ್ರಾರಂಭವಾದ ನಂತರ ಮರು ಪಾವತಿ ಮಾಡಲಾಗುತ್ತದೆ.
- ಕೈಗಾರಿಕಾ ನೀತಿ ಹಾಗೂ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ನೀತಿ-2015ರ ಪ್ರಕಾರ ಹೊಸ ಕೈಗಾರಿಕಾ ಘಟಕಗಳಿಗೆ ವಿದ್ಯುತ್ಚಕ್ತಿ ತೆರಿಗೆ ವಿನಾಯಿತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
- ತ್ಯಾಜ್ಯ ನಿರ್ವಹಣ ಘಟಕದ ಸ್ಥಾಪನೆಗಾಗಿ ಕೈಗಾರಿಕಾ ನೀತಿ ಹಾಗೂ ಕೃಷಿ ವಾಣಿಜ್ಯ ಮತ್ತು ಆಹಾರ ನೀತಿ-2015ರ ಪ್ರಕಾರ ಒಟ್ಟು ಬಂಡವಾಳ ಹೂಡಿಕೆಯ ಮೇಲೆ ಶೇ:50% ರಂತೆ ಗರಿಷ್ಟ ರೂ.1.00 ಕೋಟಿವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
- ಬಡ್ಡಿ ಸಹಾಯಧನವನ್ನು ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಯಾವ ಘಟಕದ ಮಾಲೀಕರು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿರುವ ಅಂತಹ ಘಟಕಗಳಿಗೆ ಶೇ:6% ರಂತೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.
-
ತಾಂತ್ರಿಕ ಉನ್ನತಿಕರಣದ ಎಂಎಸ್ಎಂಇ ಸಲುವಾಗಿ.
- ಘಟಕಗಳಿಗೆ ಶೇ:5% ರಂತೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.
-
ಎಂಎಸ್ಎಂಇ ಘಟಕಗಳಿಗೆ ಐಎಸ್ಓ ಪ್ರಮಾಣ ಪತ್ರದ ಸಲುವಾಗಿ ಸಾಮಾನ್ಯರಿಗೆ ಶೇ:75% ರಷ್ಟು ಗರಿಷ್ಠ ರೂ.75,000 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಹಿಂದುಳಿದ ವರ್ಗ-ಪ್ರವರ್ಗ-1 -2ಎ ಘಟಕದವರಿಗೆ ಗರಿಷ್ಟ ರೂ.1,00,000 ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
-
ಎಂಎಸ್ಎಂಇ ಘಟಕಗಳಿಗೆ ಬಿಐಎಸ್ ಪ್ರಮಾಣ ಪಡೆಯಲು ಸಾಮಾನ್ಯ ವರ್ಗದ ಘಟಕಗಳಿಗೆ ರೂ.50,000 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಹಿಂದುಳಿದ ವರ್ಗ-ಪ್ರವರ್ಗ-1-2ಎ ಘಟಕದವರಿಗೆ ಗರಿಷ್ಟ ರೂ.1,00,000 ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
-
ಎಂಎಸ್ಎಂಇ ಘಟಕಗಳಿಗೆ ತಾಂತ್ರಿಕ ಕೌಶಲ್ಯವನ್ನು ಅಳವಡಿಸಿಕೊಳ್ಳುವ ಸಲುವಾಗಿ ಶೇ:25% ರಂತೆ ಸಾಮಾನ್ಯ ವರ್ಗದವರಿಗೆ ರೂ.50,000 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಹಿಂದುಳಿದ ವರ್ಗ-ಪ್ರವರ್ಗ-1 -2ಎ ಘಟಕದವರಿಗೆ ಗರಿಷ್ಟ ರೂ.1,00,000 ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
-
ವಿದ್ಯುತ್ಚಕ್ತಿ ಉಳಿತಾಯ ಮಾಡಲು ಕ್ರಮ ಕೈಗೊಂಡ ಸಾಮಾನ್ಯ ವರ್ಗದ ಎಂಎಸ್ಎಂಇ ಘಟಕಗಳಿಗೆ ಗರಿಷ್ಠ ರೂ.5,00,000 ಹಾಗೂ ರೂ.50,000 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಹಿಂದುಳಿದ ವರ್ಗ-ಪ್ರವರ್ಗ-1 -2ಎ ಘಟಕದವರಿಗೆ ಗರಿಷ್ಟ ರೂ.7,50,000 ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
-
ಟೆಕ್ಸಾಕ್ ಹಾಗೂ ಸಿಡಾಕ್ ಇವರಿಂದ ತಯಾರಿಸಲ್ಪಟ್ಟ ಯೋಜನಾ ವರದಿ ಸಲುವಾಗಿ ಶೇ:25% ರಂತೆ ಗರಿಷ್ಠ ರೂ.2,00,000 ಗಳವರೆಗೆ ಮರುಪಾವತಿ ಮಾಡಲಾಗುತ್ತದೆ.
-
ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಹಾಗೂ ಬೃಹತ್ ಕೈಗಾರಿಕೆಗಳಿಗೆ ಜಿ.ಎಸ್.ಟಿ.ಯ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸುವ ಯೋಜನೆ.
-
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ.
-
ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯಡಿ ಶೇ:60% ರಂತೆ ಗರಿಷ್ಟ ರೂ.5.00 ಲಕ್ಷ ಸಹಾಯಧನ ಅತೀ ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆಗೆ ನೀಡಲಾಗುತ್ತದೆ.
ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)
- ಸಹಾಯಧನ ಮಂಜೂರಾತಿ ಆದೇಶ
- ಎಪಿಎಂಸಿ ಸೆಸ್ ವಿನಾಯಿತಿ ಪ್ರಮಾಣ ಪತ್ರ
- ಮುದ್ರಾಂಕ ಶುಲ್ಕ ವಿನಾಯಿತಿ ಪ್ರಮಾಣ ಪತ್ರ
- ವಿದ್ಯುತ್ಚಕ್ತಿ ವಿನಾಯಿತಿ ಪ್ರಮಾಣ ಪತ್ರ
- ತ್ಯಾಜ್ಯ ನಿರ್ವಹಣ ಘಟಕದ ಸಹಾಯಧನದ ಆದೇಶ ಪ್ರತಿ
- ಬಡ್ಡಿ ಸಹಾಯಧನ ಮಂಜೂರಾತಿ ಆದೇಶ
- ಭೂ ಪರಿವರ್ತನಾ ಶುಲ್ಕ ಪ್ರಮಾಣ ಪತ್ರ
- ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ ಬ್ರೋಚರ್ಸ್.