ಮುಚ್ಚಿ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ

ಇಲಾಖೆಯ ಬಗ್ಗೆ

ಬೆಂಕಿ ಹಾಗೂ ದುರಂತ ಘಟನೆ ಸಂಭವಿಸಿದ ತಕ್ಷಣ ಮೊದಲು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನು ಕೈಗೆತ್ತಿ ಕೊಳ್ಳುವ ಹೊಣೆ, ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ಎಮರ್ಜೆನ್ಸಿ ಇಲಾಖೆಯದಾಗಿದೆ. ಪೈರ್ ಅಂಡ ಎಮರ್ಜೆನ್ಸಿ ಸೇವಾ ಸಿಬ್ಬಂದಿಗಳು ತಮ್ಮ ಪ್ರಾಣಾಪಯದ ಅರಿವಿದ್ದರೂ ಸಹ ದುರ್ಘಟನೆಯ ಸ್ಥಳ, ಕುಸಿದ ಕಟ್ಟಡ, ಕಲುಷಿತ ವಾತಾವರಣದಲ್ಲಿ ಜನರ ಜೀವಗಳು ತಮ್ಮ ಕಣ್ಣು ಮುಂದೆಯೇ ಸಾಯುತ್ತಿರುವಂತಹ ಅತಿ ಸೂಕ್ಷ ಜಾಗಗಳಿಗೆ ತಮ್ಮ ಜೀವದ ಹಂಗು ತೊರೆದು ಮುನ್ನುಗ್ಗಿ  ನಿರ್ವಹಿಸುವಂತಹ ಈ ಕರ್ತವ್ಯಕ್ಕೆ ಖಂಡಿತ ಇತರೆ ಕೆಲಸಗಳು ಸಾಟಿಯಾಗಲಾರವು. ಇಂತಹ ಮಹತ್ ಕಾರ್ಯ ಸಾಧನೆಗಾಗಿ ಇವರು, ಎಂಬ ಜೀವ ಉಳಿಸುವ ಅಭಯವನ್ನು ಜನರಿಗೆ ನ ವೀ ಸರ್ವ ಟು ಸೇವ್” .

ಇಲಾಖೆಯ ಚಟುವಟಿಕೆಗಳು

ಇಲಾಖೆಯಲ್ಲಿ ತಾಂತ್ರಿಕ  ತರಭೇತಿ ಪಡೆದ ಸಿಬ್ಬಂದಿಗಳು ಜನರ ಜೀವ ಉಳಿಸಲು, ಅಸ್ತಿ ಸಂರಕ್ಷಿಸಲು ತಮ್ಮ ಪ್ರಾಣವನ್ನೇ ಮುಡುಪಗಿಡುವ ಮೂಲಕ ಒಂದು ಹೊಸ ಶಕೆಯನ್ನು ಪ್ರಾರಂಬಿಸಿರುತ್ತಾರೆ.

​ ಕಟ್ಟಡ ನಿರ್ಮಾಣದಲ್ಲಿ ಹೊಸ ಹೊಸ ತಾಂತ್ರಿಕತೆ ಅಳವಡಿಕೆ,  ಪ್ಲಾಸ್ಟಿಕ್, ಕೆಮಿಕಲ್ಸ್ ಹಾಗೂ ಇತರೆ ಸಿಂಥೆಟಿಕ್ ವಸ್ತುಗಳ  ಬಳಕೆಯು ಇಲಾಖೆಯನ್ನು ಹೆಚ್ಚು ಹೆಚ್ಚು ತೊಂದರೆಗಳಿಗೆ ಸಿಲುಕಿಸಿದೆ. ಸಾರ್ವತ್ರಿಕ ಸಾರಿಗೆ ವ್ಯವಸ್ಥೆ, ಬೃಹದಕಾರದ ವಸತಿಗಳು , ವಾಯು ಸಾರಿಗೆ, ಭೂಯಡಿಯ ಸಾರಿಗೆ ವ್ಯವಸ್ಥೆ,  ರಾಸಾಯನಿಕ/ ಪೆಟ್ರೋ ರಾಸಾಯಿನಿಕ/ ಅಡುಗೆ ಅನಿಲಗಳ ಪೈಪ್‍ಗಳ ಮೂಲಕ ಸಾಗಿಸುವ ವ್ಯೆವಸ್ಥೆಯು ಮಾನವ ಜೀವಕ್ಕೆ ಬೆದರಿಕೆಯನ್ನೊಡುತ್ತಿವೆ.

ಇಂತಹ ದುರಂತದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಇಲಾಖೆಯು ಹಲವಾರು ಯೋಜನೆಗಳನ್ನು ಅಳವಡಿಸಿಕೊಂಡಿದೆ. ಸಿಬ್ಬಂದಿಗಳಿಗೆ ಉತ್ತಮ ತರಭೇತಿ, ಅಸಾಧಾರಣ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾಗಿರುವ ಉಪಕರಣಗಳನ್ನು ಹೊಂದಲು ಸರಿಯಾದ ಮಾರ್ಗದರ್ಶನದಲ್ಲಿ  ಹೆಜ್ಜೆ ಇಟ್ಟಿದೆ. ಅಂತರಿಕ ವ್ಯವಸ್ಥೆ, ಸಾಮಾಥ್ರ್ಯವೃಧ್ದಿ, ಜ್ಞಾನದ ವಿಸ್ತರಣೆ ಹಾಗೂ ಬಳಕೆ, ಕೌಶಲ್ಯ ವೃಧ್ದಿಗಳು ಇಲಾಖೆಯ ಬೆಳವಣಿಗೆಗೆ ಪ್ರಮುಖವಾಗಿ ಬೇಕಾಗಿರುವಂತಹ ಅವಶ್ಯಕತೆಗಳಾಗಿರುತ್ತವೆ. ಮುಂದೊಂದು ದಿನ ಅವುಗಳ ಬೆಳವಣಿಗೆಯಾಗಿ, ಇಲಾಖೆಯು ಅಭಿವೃಧ್ದಿ ಪಥದಲ್ಲಿ ಸಾಗಿ ಉತ್ತಮ ಯಶಸ್ಸುಗಳಿಸಲೆಂದು ಆಶಿಸುತ್ತೇನೆ. 

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

      https://ksfes.karnataka.gov.in/