ಮುಚ್ಚಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

ಇಲಾಖೆಯ ಬಗ್ಗೆ

ಕರ್ನಾಟಕ ಸರಕಾರದ ಅಧೀನದಲ್ಲಿ ಪ್ರತ್ಯೇಕ ಸಚಿವಾಲಯವನ್ನು ಹೊಂದಿದ್ದು, ರಾಜ್ಯ ಮಟ್ಟದ ಮಾನ್ಯ ಸಚಿವರ ನೇತೃತ್ವದಲ್ಲಿ  ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾನ್ಯ ನಿರ್ದೇಶಕರ ಮಾರ್ಗದರ್ಶನದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕ ಮಟ್ಟದಲ್ಲಿ ಇಲಾಖಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಇಲಾಖೆಯ ಚಟುವಟಿಕೆಗಳು

ಕರ್ನಾಟಕದ ಎಲ್ಲಾ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಲು, ಸಮಾನ ಪಾಲುದಾರರಾಗಿ ಮತ್ತು ರಾಜ್ಯದ ಎಲ್ಲಾ ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಬಾಲ್ಯಕ್ಕೆ ಅಗತ್ಯವಾದ ಕಾಳಜಿ ಮತ್ತು ರಕ್ಷಣೆಯನ್ನು ಒದಗಿಸುವುದು, ಆ ಮೂಲಕ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಪೂರಕ ಪೌಷ್ಠಿಕ ಆಹಾರ ವಿತರಣೆ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಶಾಲಾ ಪೂರ್ವ ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ಶಿಕ್ಷಣ, ಸೃಷ್ಠಿ ಯೋಜನೆ(ಮೊಟ್ಟೆಗಳನ್ನು ಒದಗಿಸುವುದು), ಕ್ಷೀರ ಭಾಗ್ಯ (ಹಾಲು ವಿತರಣೆ),ಮಾತೃಪೂರ್ಣ ಯೋಜನೆ, ಐಸಿಡಿಎಸ್ ತರಬೇತಿ ಕಾರ್ಯಕ್ರಮ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಕಲ್ಯಾಣ ನಿಧಿ ಕಾರ್ಯಕ್ರಮ, ಕಿಶೋರಿ ಶಕ್ತಿ ಯೋಜನೆ, ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಠಿಕ ಆಹಾರ ವಿತರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ, ಪ್ರಧಾನನ್ –ಪಿಎಂಎಂವಿವೈ, ರಾಷ್ಟ್ರೀಯ ಶಿಶು ಪಾಲನಾ ಕೇಂದ್ರಗಳು, ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ ಅನುಷ್ಠಾನ, ಶಿಕ್ಷಣ ಮತ್ತು ಸಂವಹನ (ಐಇಸಿ), ಮಕ್ಕಳ ಹಬ್ಬ, ವಿವಿಧ ಸಾಧಕರಿಗೆ ಗೌರವ, ಜೆ.ಜೆ.ಆಕ್ಟ್, ಬಾಲಕಿಯರ ಬಾಲಮಂದಿ ಮತ್ತು ಬಾಲಕರ ಬಾಲಮಂದಿರ, ಪಿ.ಒ.ಆಕ್ಟ್, ಬಾಲಭವನ, ಮಕ್ಕಳ ಕಲ್ಯಾಣ,  ಬಾಲ್ಯ ವಿವಾಹ ನಿಷೇಧ ಕೋಶ, ಭಾಗ್ಯಲಕ್ಷ್ಮಿ, ಪ್ರಶಸ್ತಿಗಳು, ಮಕ್ಕಳ ದಿನಾಚರಣೆ, ಉಜ್ವಲ, ಬೇಟಿ ಬಚಾವೊ ಬೆಟ್ ಪಡಾವೊ, ಸ್ವಾಗತ ಕೇಂದ್ರ, ನಿರ್ಗತಿಕ ಮಕ್ಕಳ ಕುಟೀರಗಳು, ಸಾಂತ್ವನ, ಬಾಲಕಿಯರು ಮತ್ತು ದುಡಿಯುವ ಮಹಿಳೆಯರ ವಸತಿ ನಿಲಯಗಳು, ಗೆಳತಿ, ಸ್ಥ್ರೈರ್ಯ ನಿಧಿ ಯೋಜನೆ, ಕೌಟುಂಬಿಕ ದೌರ್ಜನ್ಯ, ಸ್ತ್ರೀಶಕ್ತಿ ಮತ್ತು ಬಾಲ್ಯ ವಿವಾಹ ತಡೆಗಟ್ಟುವಿಕೆ, ಮಾಜಿ ದೇವದಾಸಿ ಮಹಿಳೆಯರಿಗೆ ಮಾಶಾಸನ, ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ನಿರ್ಮಾಣ, ದೇವದಾಸಿ ಪುನರ್ವಸತಿ ಕಾರ್ಯಕ್ರಮ, ಲಿಂಗತ್ವ ಅಲ್ಪ ಸಂಖ್ಯಾತರಿಗೆ ಪುನರ್ವಸತಿ ಯೋಜನೆ, ಚೇತನ ಯೋಜನೆ, ಉದ್ಯೋಗಿನಿ, ಮಹಿಳಾ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಯೋಜನೆ, ಮಾರುಕಟ್ಟೆ ನೆರವು ಯೋಜನೆ, ಕಿರುಸಾಲ ಯೋಜನೆ, ರಾಜ್ಯ ಸಂಪನ್ಮೂಲ ಕೇಂದ್ರ, ಸಮೃದ್ಧಿ, ಧನಶ್ರೀ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆ (ಮಹಿಳಾ ತರಬೇತಿ ಯೋಜನೆ).

ಸಾಂತ್ವನ ಕೇಂದ್ರಗಳು

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳು ರಾಯಚೂರು ಜಿಲ್ಲೆಯ ಮಾನವಿ, ಸಿಂಧನೂರು, ದೇವದುರ್ಗ, ಲಿಂಗಸುಗೂರು ತಾಲೂಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ, ಮಹಿಳೆಯರಿಗೆ ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ ಹಾಗೂ ಇನ್ನಿತರ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುವುದಲ್ಲದೇ ಸಾಮಾಜಿಕವಾಗಿ, ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಸರ್ಕಾರವು ಇಂತಹ ಮಹಿಳೆಯರಿಗೆ ಸಾಂತ್ವನವನ್ನು ನೀಡಲು ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಮಹಿಳೆಯರು ತಾವು ಈ ಮೇಲೆ ತಿಳಿಸಿದ ಯಾವುದಾದರೂ ನೋವನ್ನು ಅನುಭವಿಸುತ್ತಿದ್ದರೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ, ಸಾಂತ್ವನ ಕೇಂದ್ರದ ಸಹಾವಾಣಿ ಸಂಖ್ಯೆ

(1) ಮಾನವಿ ತಾಲೂಕು :: 08538-221344

(2) ಸಿಂಧನೂರು ತಾಲ್ಲೂಕ :: 08535-220714

(3) ದೇವದುರ್ಗ ತಾಲ್ಲೂಕು :: 9449281737

(4) ಲಿಂಗಸುಗೂರು ತಾಲ್ಲೂಕು :: 9449557829

ಸಾಂತ್ವನ ಕೇಂದ್ರಗಳಿಗೆ ಕರೆ ಮಾಡಿ ಸಾಂತ್ವನವನ್ನು ಹಾಗೂ ಕಾನೂನು ಸಲಹೆಗಳನ್ನು ಪಡೆಯಲು ಅವಕಾಶವಿರುತ್ತದೆ.

ಸಖಿ ಒನ್ ಸ್ಟಾಪ್ ಸೆಂಟರ್

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೋಲೀಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಕೇಂದ್ರ ಸರ್ಕಾರದ “ಒನ್ ಸ್ಟಾಪ್ ಸೆಂಟರ್” “(ಸಖಿ)” ಕೇಂದ್ರವನ್ನು ರಾಯಚೂರು ನಗರದ ರಿಮ್ಸ್ ವೈದ್ಯಕೀಯ ಭೋದಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಇದರ ಅಗತ್ಯ ಸೇವೆಯನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಸಖಿ ಸೇವೆಯನ್ನು ಪಡೆಯಲು ಇಚ್ಚಿಸುವ ಮಹಿಳೆಯರು 181 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಸ್ವಧಾರ ಗೃಹ

ಕರ್ನಾಟಕ ಸರ್ಕಾರವು ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ, ಶಿಕ್ಷಣ, ವಸತಿ, ವೃತ್ತಿ ತರಬೇತಿ, ಸಮಾಲೋಚನೆ, ವೈದ್ಯಕೀಯ ನೆರವು, ಕುಟುಂಬಕ್ಕೆ ಪುನರ್ ಮಿಲನ, ಕಾನೂನು ನೆರವು ನೀಡುವುದರ ಮೂಲಕ ಆರ್ಥಿಕವಾಗಿ, ಸಮಾಜಿಕವಾಗಿ ಸಶಕ್ತರಾಗುವಂತೆ ಮಾಡುವ ಉದ್ದೇಶಕ್ಕಾಗಿ “ಸ್ವಧಾರ ಗೃಹ” ಗಳನ್ನು ಸ್ಥಾಪಿಸಲಾಗಿದೆ.

ರಾಯಚೂರು ನಗರದ ದೇವರ ಕಾಲೋನಿಯಲ್ಲಿ ಸ್ವಧಾರ ಗೃಹ ಕಾರ್ಯನಿರ್ವಹಿಸುತ್ತಿದ್ದು, ಇದರ ಲಾಭವನ್ನು ಪಡೆಯಲು ಇಚ್ಚಿಸುವ ಮಹಿಳೆಯರು ದೂರವಾಣಿ ಸಂಖ್ಯೆ 9448910405 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ 

“ರಾಯಚೂರು ನಗರದ ಕೃಷಿ ವಿಶ್ವ ವಿದ್ಯಾಲಯದ ಆವರಣ” ಇದರ ಲಾಭವನ್ನು ಪಡೆಯಲು ಇಚ್ಚಿಸುವ ಮಹಿಳೆಯರು ದೂರವಾಣಿ ಸಂಖ್ಯೆ 9900623843 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. 

ಹಾಗೂ “ರಾಯಚೂರು ವಿಶ್ವ ವಿದ್ಯಾಲಯ (ಪಿಜಿ ಸೆಂಟರ್) ಯರಗೇರ ರಸ್ತೆಯಲ್ಲಿ” “ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳು” ಲಭ್ಯವಿದ್ದು, ಇದರ ಲಾಭವನ್ನು ಪಡೆಯಲು ಇಚ್ಚಿಸುವ ಮಹಿಳೆಯರು ದೂರವಾಣಿ ಸಂಖ್ಯೆ 9886536360 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಮಹಿಳೆಯರು ನಗರದಲ್ಲಿ ಉದ್ಯೋಗಗಳನ್ನು ಮಾಡುತ್ತಾ ವಸತಿ ಸೌಲಭ್ಯವನ್ನು ಪಡೆಯಬೇಕಾದಲ್ಲಿ ಈ ಮೇಲೆ ತಿಳಿಸಿದ ಸ್ಥಳಗಳಲ್ಲಿ ತಾವು ವಸತಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೂ ನಗರಕ್ಕೆ ವಿವಿದ ರೀತಿಯ ಪರೀಕ್ಷೆಯನ್ನು ಬರೆಯಲು ದೂರದಿಂದ ಆಗಮಿಸುವ ಬಾಲಕಿಯರು/ಮಹಿಳೆಯರು ಸಹ ಈ ವಸತಿ ಗೃಹದಲ್ಲಿ ಕನಿಷ್ಠ ಮೊತ್ತವನ್ನು ಪಾವತಿಸಿ ತಾತ್ಕಾಲಿಕವಾಗಿ ಆಶ್ರಯ ಪಡೆಯಬಹುದಾಗಿದೆ. ಈ ವಸತಿ ಗೃಹದಲ್ಲಿ ಮಹಿಳೆಯರಿಗೆ ರಕ್ಷಣೆಯ ವ್ಯವಸ್ಥೆ ಒದಗಿಸಲಾಗಿರುತ್ತದೆ.

ಮಕ್ಕಳ ಸಹಾಯ ವಾಣಿ ಕೇಂದ್ರ

ಜಿಲ್ಲೆಯಲ್ಲಿ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದಾಗಲಿ, ಕೂಲಿ ಕಾರ್ಮಿಕ ವ್ಯವಸ್ಥೆಗೆ ಒಳಗಾಗುವುದಾಗಲಿ, ಬಾಲ್ಯ ವಿವಾಹ ಪದ್ದತಿಗೆ ಗುರಿಯಾಗುವ ಸಂದರ್ಭದಲ್ಲಿ, ಲೈಂಕಿಕ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಮತ್ತು ಇನ್ನಿತರ ಯಾವುದೇ ಕಿರುಕುಳಕ್ಕೆ ಒಳಗಾಗುವ ಸಂದರ್ಭದಲ್ಲಿ ಸಾರ್ವಜನಿಕರು/ಮಕ್ಕಳು ತಮ್ಮ ತೊಂದರೆಗಳನ್ನು “ಮಕ್ಕಳ ಸಹಾಯವಾಣಿ ಕೇಂದ್ರ”ಗಳಿಗೆ ಕರೆ ಮಾಡಿ ದೂರನ್ನು ದಾಖಲಿಸಲು ಅವಕಾಶವಿರುತ್ತದೆ.

ಮಕ್ಕಳ ಸಹಾಯವಾಣಿ ಕೇಂದ್ರದ ಸಂಖ್ಯೆ 1098 ಗೆ ಕರೆ ಮಾಡಬಹುದಾಗಿದೆ. ಮಕ್ಕಳ ಸಹಾಯವಾಣಿ ಕೇಂದ್ರವು ರಾಯಚೂರು ನಗರದ ಆಜಾದ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.