ಮುಚ್ಚಿ

ಜಿಲ್ಲಾ ಪಂಚಾಯತ್

ಜಿಲ್ಲಾ ಪಂಚಾಯತ್

ರಾಯಚೂರು ಜಿಲ್ಲಾ ಪರಿಷದ್ 1987 ನೇ ಇಸವಿಯಲ್ಲಿ   ಕರ್ನಾಟಕ ಸರಕಾರದ   ಪಂಚಾಯತ ರಾಜ್ ಕಾಯಿದೆಯ ಪ್ರಕಾರ ಸ್ಥಾಪಿತವಾಯಿತು ಮತ್ತು  1995ರ ಪಂಚಾಯತ ರಾಜ್ ಕಾಯ್ದೆಯಂತೆ ರಾಯಚೂರು ಜಿಲ್ಲಾ ಪಂಚಾಯತಿ ಕೆಲಸ ನಿರ್ವಾಹಿಸುತ್ತಿದೆ. 1987 ರಲ್ಲಿ ಪ್ರಥಮ ಬಾರಿಗೆ ಚುಣಾವಣೆ ನಡೆದಾಗ ಒಟ್ಟು ಸದಸ್ಯರ ಸಂಖ್ಯೆ 54 ಆಗಿತ್ತು. 1993ರ ಕರ್ನಾಟಕ ಪಂಚಾಯತಿ ಕಾನೂನಿನನ್ವಯ ಜಿಲ್ಲಾ ಪರಿಷತ್ ಬದಲಿಗೆ ಜಿಲ್ಲಾ ಪಂಚಾಯತಿಯು ರಚನೆಗೊಂಡಿತು. 1995ರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಸಂಖ್ಯೆ54. 

ರಾಯಚೂರು ಜಿಲ್ಲಾ ಪಂಚಾಯತ್ ಅನ್ನು 1995ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಕ್ಟ್, 1993ರ ನಿಬಂಧನೆಗಳ ಪ್ರಕಾರ ಸ್ಥಾಪಿಸಲಾಯಿತು. ಇದು ಜಿಲ್ಲೆಯ ಸ್ವಾಯತ್ತ ಮತ್ತು ಉನ್ನತ ಗ್ರಾಮೀಣ ಸ್ಥಳೀಯ ಸಂಸ್ಥೆಯಾಗಿದೆ. ಎಲ್ಲಾ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಈ ಏಜೆನ್ಸಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಜಿಲ್ಲಾ ಪಂಚಾಯತ್ ನ ಆಡಳಿತ ವ್ಯಾಪ್ತಿ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದೆ. ಜಿಲ್ಲಾ ಪಂಚಾಯತ್ ನ ಅಭಿವೃದ್ಧಿ ಚಟುವಟಿಕೆಗಳು 178 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿರುವ 7 ತಾಲೂಕು ಪಂಚಾಯತಿಗಳ ಮೂಲಕ ಜ್ಯಾರಿ ಮಾಡಲಾಗುತ್ತದೆ.

ಪ್ರಸ್ತುತ ಜಿಲ್ಲಾ ಪಂಚಾಯತ್ ಕಚೇರಿಯು  ಜಿಲ್ಲಾ ನ್ಯಾಯಲಯದ ಹತ್ತಿರ,ಹೈದ್ರಾಬಾದ ರಸ್ತೆ,ರಾಯಚೂರು ದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲಾ ಪಂಚಾಯತ್‌ನ ಕಾರ್ಯ ಈ ಕೆಳಗಿನಂತಿರುತ್ತದೆ :
  • ಆಡಳಿತ ಶಾಖೆ :  ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ಅಧೀನ ಇಲಾಖೆಗಳ ಆಡಳಿತಾತ್ಮಕ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.
  • ಅಭಿವೃಧ್ದಿ ಶಾಖೆ : ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತುಗಳ ಗ್ರಾಮೀಣ ಅಭಿವೃಧ್ದಿ ಕಾರ್ಯಕ್ರಮಗಳ ಅನುಷ್ಟಾನವನ್ನು ನೋಡಿಕೊಳ್ಳುವುದು.
  • ಲೆಕ್ಕ ಶಾಖೆ : ಸರಕಾರದ ವಿವಿಧ ಯೋಜನೆಗಳ ಅನುದಾನ ಸ್ವೀಕೃತಿ , ಬಿಡುಗಡೆ ಮತ್ತು ಅವುಗಳ ಖರ್ಚು ವೆಚ್ಚಗಳನ್ನು ಕ್ರೂಡೀಕರಿಸಿ ನಿರ್ವಹಿಸುವುದು.
  • ಯೋಜನಾ ಶಾಖೆ : ಯೋಜನಾ ವಿಭಾಗದ ಕಾರ್ಯ ಚಟುವಟಿಕೆಗಳಾದ ವಾರ್ಷಿಕ ಕರಡು ಯೋಜನೆ ತೆಯಾರಿ, ಕ್ರಿಯಾ ಯೋಜನೆ ತೆಯಾರಿ ಮತ್ತು ಯೋಜನೆಗಳ ಮೌಲ್ಯಮಾಪನ ಇತ್ಯಾದಿ ಕಾರ್ಯಚಟುವಟಿಕೆಗಳು.
  • ಪರಿಷತ್ ಶಾಖೆ : ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗಳ, ಸ್ಥಾಯೀಸಮಿತಿ ಸಭೆಗಳ ನಿರ್ಣಯಗಳನ್ನು ದಾಖಲಿಸಿ ವರದಿ ತೆಯಾರಿಸುವುದು.

      ಜಾಲತಾಣ : https://zpraichur.karnataka.gov.in