ಮುಚ್ಚಿ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಇಲಾಖೆಯ ಬಗ್ಗೆ

ಕರ್ನಾಟಕ ಸರ್ಕಾರವು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸ್ಥಾಪಿಸಿದ್ದು, ರಾಜ್ಯದ ಯುವ ಜನತೆ ಯೋಗ್ಯ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ಪಡೆದುಕೊಳ್ಳಲು  ಸಹಾಯ ಮಾಡುತ್ತದೆ.

      ದೃಷ್ಟಿ ಕೋನ : ಕ್ಷಿಪ್ರ ಸಮತೋಲಿತ ವಲಯದ ಬೆಳವಣಿಗೆ ಮತ್ತು ಅಂತರ್ಗತ ಅಭಿವೃದ್ಧಿಗೆ ಗರಿಷ್ಠ ಜನಸಂಖ್ಯಾ ಲಾಭಾಂಶವನ್ನು ಪಡೆದುಕೊಳ್ಳಲು ಎಲ್ಲರಿಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಾರ್ಹ ಕೌಶಲ್ಯ ನೀಡುವುದು ಹಾಗೂ ಈ ಮೂಲಕ ಎಲ್ಲರಿಗೂ ಯೋಗ್ಯವಾದ ಉದ್ಯೋಗಾವಕಾಶ ಕಂಡುಕೊಳ್ಳಲು ನೆರವಾಗುವುದು.

        ದ್ಯೇಯ : ಯೋಗ್ಯವಾದ ಕೆಲಸ ಮತ್ತು ಲಾಭದಾಯಕ ಉದ್ಯೋಗಕ್ಕೆ ಪ್ರವೇಶ ಪಡೆಯಲು ಸುಧಾರಿತ ಕೌಶಲ್ಯಗಳು, ಜ್ಞಾನ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅರ್ಹತೆಗಳ ಮೂಲಕ ಯುವ ಜನರನ್ನು ಸಬಲಗೊಳಿಸುವುದು ಹಾಗೂ ಜೀವನದುದ್ದಕ್ಕೂ ಕಲಿಯಲು ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ಇಲಾಖೆಯ ಚಟುವಟಿಕೆಗಳು

ರಾಜ್ಯದಲ್ಲಿನ ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ನಿಯಂತ್ರಣ, ಪ್ರಮಾಣೀಕರಣ, ಪ್ರಚಾರ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕಾರ್ಯಗಳನ್ನು ಕೈಗೊಳ್ಳುವುದು ಇಲಾಖೆಯ ಗುರಿಯಾಗಿದೆ.

ಇಲಾಖೆಯು “ಉದ್ಯೋಗ ಮೇಳ” ಮತ್ತು “ಯುವ ಕೌಶಲ್ಯ” ದಂತಹ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

 • ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ

  • ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯು ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಕೌಶಲ್ಯಾಭಿವೃದ್ದಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ನಿರುದ್ಯೋಗಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಲಾಗುವುದು,
  • ಕೌಶಲ್ಯ ತರಬೇತಿ ಆಕಾಂಕ್ಷಿಗಳು ಹಾಗೂ ತರಬೇತಿ ನೀಡುವ ಸಂಸ್ಥೆಗಳು ಇಬ್ಬರೂ ಅಧಿಕೃತ ಅಂರ್ತಜಾಲದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
 • ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ

  • ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯು, ಭಾರತ ಸರ್ಕಾರದ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಮುಖ ಯೋಜನೆಯಾಗಿದೆ. ಈ ಕೌಶಲ್ಯ ಪ್ರಮಾಣೀಕರಣ ಯೋಜನೆಯ ಉದ್ದೇಶವೇನೆಂದರೆ, ಹೆಚ್ಚಿನ ಸಂಖ್ಯೆಯ ಭಾರತೀಯ ಯುವ ಜನರನ್ನು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುವುದು ಹಾಗೂ ಈ ಮೂಲಕ ಉತ್ತಮ ಜೀವನೋಪಾಯ ಪಡೆಯಲು ನೆರವಾಗುವುದು.
  • ಅಂರ್ತಜಾಲ ತಾಣ https://www.msde.gov.in/
 • ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ

  • ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಎಂಬುದು ಗ್ರಾಮೀಣ ಜೀವನೋಪಾಯದ ಒಂದು ಭಾಗವಾಗಿದ್ದು, ಗ್ರಾಮೀಣ ಬಡ ಕುಟುಂಬಗಳ ಆದಾಯಕ್ಕೆ ವೈವಿಧ್ಯತೆಯನ್ನು ಸೇರಿಸುವ ಮತ್ತು ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವ ಉಭಯ ಉದ್ದೇಶಗಳನ್ನು ಹೊಂದಿದೆ.
  • ಅಂರ್ತಜಾಲ ತಾಣ : http://ddugky.gov.in/
 • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ

  • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗಳು ಗ್ರಾಮೀಣ ಬಡ ಕುಟುಂಬಗಳ ಬಡತನ ನಿವಾರಣೆಯ ಉದ್ದೇಶ ಹೊಂದಿದೆ. ಈ ಯೋಜನೆಯು ಅವರಿಗೆ ಲಾಭದಾಯಕ ಸ್ವಉದ್ಯೋಗ ಮತ್ತು ನುರಿತ ವೇತನ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಸುಸ್ಥಿರ ಆಧಾರದ ಮೇಲೆ ಅವರ ಗ್ರಾಮೀಣ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆ ತರುವುದಾಗಿದೆ.
  • ಅಂರ್ತಜಾಲ ತಾಣ : www.nrlm.gov.in
 • ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ

  • ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಗಳು ನಗರ ಬಡ ಕುಟುಂಬಗಳ ಬಡತನ ನಿವಾರಣೆಯ ಉದ್ದೇಶ ಹೊಂದಿದೆ.. ಈ ಯೋಜನೆಯು ಅವರಿಗೆ ಲಾಭದಾಯಕ ಸ್ವಉದ್ಯೋಗ ಮತ್ತು ನುರಿತ ವೇತನ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಸುಸ್ಥಿರ ಆಧಾರದ ಮೇಲೆ ಅವರ ನಗರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆ ತರುವುದಾಗಿದೆ.
  • ಅಂರ್ತಜಾಲ ತಾಣ : https://nulm.gov.in/
 • ಕರ್ನಾಟಕ  ಉದ್ಯಮಶೀಲತಾಭಿವೃದ್ಧಿ  ಕೇಂದ್ರ (ಸಿಡಾಕ್)

  • ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರವು ಉದ್ಯಮಶೀಲತಾ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಸ್ಥೆಯಾಗಿದೆ. ಸಿಡಾಕ್, ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತಿದೆ :
   • ಶಿಕ್ಷಣ ಹಾಗೂ ತರಬೇತಿಯ ಮೂಲಕ ಉದ್ಯಶೀಲತೆಯನ್ನು ಅಧಿಕಗೊಳಿಸುವುದು.
   • ಸ್ವ-ಉದ್ಯೋಗ ಅವಕಾಶಗಳಲ್ಲಿ ಗುಣಕ ಪರಿಣಾಮವನ್ನು ಉಂಟು ಮಾಡುವುದು.
   • ಸಣ್ಣ ಉದ್ಯಮಿಗಳ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು.
   • ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹರಡುವುದು; ಅದರಿಂದ ಸಾಮಾಜಿಕ ಹಿನ್ನಲೆಯ ಉದ್ಯಮಶೀಲತೆ ವರ್ಗವನ್ನು ವಿಸ್ತರಿಸುವುದು.
   • ಉದ್ಯಮಶೀಲತಾ ಕಾರ್ಯಕ್ರಮಗಳು ಸಾಮಾನ್ಯ ವಿಶೇಷವಾಗಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿಶೇಷ ಗುಂಪುಗಳನ್ನು ಒಳಗೊಂಡಿರುತ್ತದೆ.
   • ಉದ್ಯಮಶೀಲತೆಯ ಅಭಿವೃದ್ದಿ ಕಾರ್ಯದ ತರಬೇತುದಾರರು ಹಾಗೂ ಪ್ರೇರೆಪಕರ ಕಲಿಕಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.
  • ಅಂರ್ತಜಾಲ ತಾಣ: www.cedokdwd.karnataka.gov.in