ಮುಚ್ಚಿ

ಜಲದುರ್ಗ ಕೋಟೆ

ವರ್ಗ ಐತಿಹಾಸಿಕ

ಫೋಟೋ ಗ್ಯಾಲರಿ

  • ಜಲದುರ್ಗ ಕೋಟೆ
    ಜಲದುರ್ಗ ಕೋಟೆ, ರಾಯಚೂರು

ಲಿಂಗಸುಗೂರು ತಾಲೂಕಿನ ಐತಿಹಾಸಿಕ ಜಲದುರ್ಗ ಕೋಟೆಗೆ ಪ್ರವಾಸೋದ್ಯಮ ಇಲಾಖೆ 1 ಕೋಟಿ ರೂ. ಮಂಜೂರು ಮಾಡಿದ್ದು, ಅವಸಾನದಂಚಿನಲ್ಲಿರುವ ಕೋಟೆ ಅಭಿವೃದ್ಧಿಗೊಂಡು ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಗರಿಗೆದರಿವೆ.ತಾಲೂಕು ಕೇಂದ್ರ ಸ್ಥಾನದಿಂದ 18 ಕಿ.ಮೀ. ಅಂತರದಲ್ಲಿರುವ ಕೃಷ್ಣಾ ನದಿ ದಡದಲ್ಲಿರುವ ಜಲದುರ್ಗ ಕೋಟೆ ಪರಿಸರ ಪ್ರಿಯರನ್ನು ಸೆಳೆಯುತ್ತಿದೆ. ಜಲದುರ್ಗ ಕೋಟೆಯನ್ನು ದೇವಗಿರಿಯ ಯಾದವರು 12ನೇ ಶತಮಾನದಲ್ಲಿ ಕಟ್ಟಿಸಿರಬಹುದೆಂದು ಹೇಳಲಾಗುತ್ತಿದೆ. ಆದಿಲ್ಶಾಹಿಗಳ ವಾಸ್ತುಶಿಲ್ಪ ಎದ್ದು ಕಾಣುತ್ತಿದೆ. ಸುಮಾರು 400 ಅಡಿ ಎತ್ತರದ ಕೋಟೆಯ ಬುರುಜು ಕಟ್ಟಲಾಗಿದೆ. ಹಿಂದೆ ಅಪರಾಧಿಗಳನ್ನು ಕೋಟೆ ಬುರುಜು ಮೇಲಿಂದ ಕೃಷ್ಣಾ ನದಿಗೆ ನೂಕಿ ಶಿಕ್ಷೆ ಕೊಡುತ್ತಿದ್ದರೆಂದು ಹೇಳಲಾಗುತ್ತಿದೆ. ಈ ಕೋಟೆಯ ಸುತ್ತಲೂ ಕೃಷ್ಣಾ ನದಿ ಕವಲೊಡೆದು ಹರಿಯುತ್ತಿದ್ದರಿಂದ ಜಲದುರ್ಗ ಕೋಟೆ ಅತ್ಯಂತ ರಕ್ಷಣಾ ಕೋಟೆಯಾಗಿತ್ತು. ಬೀದರ್-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಿಂದ 18 ಕೀ.ಮೀ ದೂರದದಲ್ಲಿದೆ. ಸೌಂದರ್ಯ ನೋಡಬೇಕೆಂಬ ಪ್ರವಾಸಿಗರು ಸ್ವಂತ ವಾಹನಗಳಲ್ಲಿ ಹೋಗಬೇಕಾಗುತ್ತದೆ. ಈ ಕೋಟೆ ಎತ್ತರದಲ್ಲಿದ್ದು ಕೆಳಗೆ ಎರಡು ನದಿಗಳ ಸಂಗಮವನ್ನು ನೋಡಲು ಅತ್ಯಂತ ರಮಣೀಯವಾಗಿರುತ್ತದೆ.

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 113 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ