ಮುಚ್ಚಿ

ಅಂಬಾ ಮಠ

ವರ್ಗ ಧಾರ್ಮಿಕ

ಫೋಟೋ ಗ್ಯಾಲರಿ

  • Amba Devi
    ಶ್ರೀ ಅಂಬಾ ದೇವಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪೂರ ಗ್ರಾವiದ ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ರಾಯಚೂರಿನಿಂದ ಸುಮಾರು 108 ಕೀ.ಮೀ ದೂರದಲ್ಲಿದೆ, ಪ್ರವಾಸಿಗರು ಶ್ರೀ ದೇವಿಯ ದರ್ಶನ ಪಡೆಯಲು ಬೇರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಆಂಧ್ರಾ ರಾಜ್ಯದಿಂದ ಬರುತ್ತಾರೆ, ದಸರಾ ಹಾಗೂ ದೀಪಾವಳಿ ಹಬ್ಬಳಗಳಲ್ಲಿ ಶ್ರೀ ಅಂಬಾದೇವಿಯ ವಿಶೇಷ ಪೂಜಾ ಕಾರ್ಯಕ್ರವiಗಳು ಜರುಗುತ್ತವೆ. ಅಂಬಾಮಠದಲ್ಲಿರುವ ದೇವಿ ಮೂರ್ತಿಯ ಪಕ್ಕದಲ್ಲಿ ಈಶ್ವರ ಹಾಗೂ ನಂದಿಯ ವಿಗ್ರಹಗಳಿವೆ. ಶಿವನು ನಂದಿಗೆ ದೇವಿಯ ಪುರಾಣ ಹೇಳಿದ ಎಂಬುವುದರ ಪ್ರತೀತಿ ನಂಬಲಾಗಿದೆ. ನಾಡಹಬ್ಬ ದಸರಾ ಹಬ್ಬವನ್ನು ಅಮವಾಸ್ಯೆ ಮರುದಿನದಂದು ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನಗಳೊಂದಿಗೆ ಆಚರಿಸಲಾಗಿತ್ತದೆ ಹಾಗೂ 350 ವರ್ಷಗಳಿಂದಲೂ ಭಕ್ತರ ದಂಡು ಹರಿದು ಬರುತ್ತಿದೆ ಎಂದು ತಿಳಿದುಬಂದಿದೆ.ದಸರಾ ಹಾಗೂ ದೀಪಾವಳಿ ಹಬ್ಬಳಗಳಲ್ಲಿ ಶ್ರೀ.ಅಂಬಾದೇವಿಯ ವಿಶೇಷಪೂಜಾ ಕಾರ್ಯಕ್ರವiಗಳು ಜರುಗುತ್ತವೆ. 

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 93 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ