ಮುಚ್ಚಿ

ಗುಂಡಲಬಂಡಿ ಜಲಪಾತ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಫೋಟೋ ಗ್ಯಾಲರಿ

  • ಗುಂಡಲಬಂಡಿ ಜಲಪಾತ
    ರಾಯಚೂರು ಗುಂಡಲಬಂಡಿ ಜಲಪಾತ

ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150(ಎ) ಗುರುಗುಂಟಾ ಬಳಿ ಗೋಲಪಲ್ಲಿ ಸೇತುವೆಯಿಂದ ಮೈಲಿ ದೂರದದಲ್ಲಿ 85 ರಿಂದ 95 ಅಡಿಗಳ ಮೇಲಿಂದ ಬೃಹತ್ ಕಲ್ಲು ಬಂಡೆಗಳ ಮೇಲೆ ನೀರಿನ ಝರಿ ಹರಿಯುವ ಮನಮೋಹಕ ನೋಟ ಅನೇಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ, ಕಲ್ಲು ಗುಡ್ಡಗಳ ಮೇಲಿಂದ ನೀರು ಬೀಳುವ ಪರಿಣಾಮ ಇದಕ್ಕೆ ಸ್ಧಳಿಯರು ಗುಂಡಲಬಂಡಿ ಜಲಪಾತ ಎಂದು ಕರೆಯುತ್ತಾರೆ ಜಲಪಾತದ ತುದಿಯ ಆರಂಭದಲ್ಲಿ ಕಲ್ಲು ಬಂಡೆಗಳ ಮೂಲಕ ಬೀಳುವ ನೀರು ಕವಲೋಡೆಯುತ್ತದೆ ನಂತರ ನಾನಾ ಕಡೆಯಲ್ಲಿ ಹರಿದು ಮುಂಭಾಗದಲ್ಲಿರುವ ಬೃಹತ್ ಮಡುಗು ಸೇರುತ್ತದೆ, ಜಲಪಾತವು ಸುತ್ತಲಿರುವ ಬೆಟ್ಟಕ್ಕಿಂತ ಎತ್ತರದ ಪ್ರದೇಶದಲ್ಲಿರುವುದರಿಂದ  ಗೋಲಪಲ್ಲಿ ಗ್ರಾಮದಿಂದ ನೋಡಿದರೆ ಸೊಗಸಾಗಿ ಕಾಣುತ್ತದೆ, ರಾಷ್ಠೀಯ ಹೆದ್ದಾರಿ ಹೆದ್ದಾರಿಯಲ್ಲಿ ತೆರಳುವ ಅನೇಕರು ಜಲಪಾತವನ್ನು ಕಂಡು ಸುಂದರ ಜಲಪಾತಕ್ಕೆ ಬೇಟಿನೀಡುತ್ತಾರೆ.

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 95 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ