ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ
ಇಲಾಖೆಯ ಬಗ್ಗೆ
ಸಂಸ್ಥೆಯು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆ.ಆರ್.ಐ.ಡಿ.ಎಲ್ ಸಂಸ್ಥೆಯು 1971 ರಲ್ಲಿ ಕರ್ನಾಟಕ ಭೂಸೇನಾ ನಿರ್ದೇಶನಾಲಯವಾಗಿ ಅಸ್ತಿತ್ವಕ್ಕೆ ಬಂದ ನಂತರ 1974ರ ಆಗಸ್ಟ್ 09 ರಂದು ಕರ್ನಾಟಕ ಭೂಸೇನಾ ನಿಗಮವಾಗಿ ಸಂಪೂರ್ಣ ಮಾಲೀಕತ್ವದ ಅಡಿಯಲ್ಲಿ ಪರಿವರ್ತನೆಗೊಂಡಿತು. ಕರ್ನಾಟಕ ಭೂಸೇನಾ ನಿಗಮ ನಿಯಮಿತದಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಎಂದು ದಿನಾಂಕ 6 ನೇ ಆಗಸ್ಟ್ 2009 ರಿಂದ ಜಾರಿಗೆ ಬರುವಂತೆ ಬದಲಿಸಲಾಗಿದೆ.
ಇಲಾಖೆಯ ಚಟುವಟಿಕೆಗಳು
ಸಿವಿಲ್ ಕಾಮಗಾರಿಗಳ ನಿರ್ವಹಣೆಯಿಂದ ಸರ್ಕಾರದ ಆಸ್ತಿಯನ್ನು ಸೃಷ್ಟಿಸುವ ವಿಶಿಷ್ಟ ಸಂಸ್ಥೆಯಾಗಿರುತ್ತದೆ.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ರಾಜ್ಯಾದಾದ್ಯಂತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಸಂಪರ್ಕ, ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು, ಹಾಸ್ಟೆಲ್ ಗಳು, ಮನೆಗಳು ಗ್ರಾಹಕರ ವೇದಿಕೆ, ಯುವ ಸೇವೆಗಳು, ನವೋದಯ ವಿದ್ಯಾಲಯ ಸಂಘಟನೆಗಳು, (ಎನ್.ವಿ.ಎಸ್) ಕೇಂದ್ರೀಯ ವಿದ್ಯಾಲಯ ಸಂಘಟನೆಗಳು (ಕೆ.ವಿ.ಎಸ್.) ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಕೊಡುವ ನಿಟ್ಟಿನಲ್ಲಿ ಜಲಸಂವರ್ಧನಾ ಕಾಮಗಾರಿಗಳು, ಪಶು ಸಂಗೋಪನೆ, ಮೀನುಗಾರಿಕೆ, ಸಣ್ಣ ನೀರಾವರಿ, ಗ್ರಾಮೀಣ ಸಂಪರ್ಕ, ಸಲಹಾ ಕೇಂದ್ರಗಳು ಮುಂತಾದ ಕಾಮಗಾರಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವುದು.