ಮುಚ್ಚಿ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು

ಇಲಾಖೆಯ ಬಗ್ಗೆ

ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು.  ಅವುಗಳನ್ನು “ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್” ಗಳೆಂದು ಕರೆಯಲಾಗುತಿತ್ತು. ನಂತರ ಇದನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ “ಪಾಲಿಟೆಕ್ನಿಕ್ ” ಗಳೆಂದು ಮರು ನಾಮಕರಣ ಮಾಡಿಲಾಯಿತು. ಆಗ ಸಂಸ್ಥೆಗಳು “ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ ” ನ ಅಧೀನದಲ್ಲಿದ್ದವು. ತದನಂತರ ಪಾಲಿಟೆಕ್ನಿಕ್ ಸಂಸ್ಥೆಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ “ತಾಂತ್ರಿಕ ಶಿಕ್ಷಣ ಇಲಾಖೆ” ಅಸ್ತಿತ್ವಕ್ಕೆ ಬಂದಿತು.

ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಕಾರ್ಯವು ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಅರ್ಹ ಅಭ್ಯರ್ಥಿಗಳಿಗೆ ತಾಂತ್ರಿಕ ಪರೀಕ್ಷಾ ಮಂಡಳಿಯು ಡಿಪ್ಲೋಮಾ/ಪೋಸ್ಟ್ ಡಿಪ್ಲೋಮಾ/ಟೈಲರಿಂಗ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿ, ಅರ್ಹ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುವುದು.

ಇಲಾಖೆಯ ಚಟುವಟಿಕೆಗಳು

 ಬೋಧನೆ ಮತ್ತು ಕಲಿಕೆ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಲಿಂಗಸೂಗೂರ್ ನಲ್ಲಿ ಈ ಕೆಳಕಂಡ ಕೋರ್ಸ್‌ಗಳು ನೀಡಲಾಗುತ್ತಿದೆ :

  • ಸಿವಿಲ್ ಇಂಜಿನಿಯರಿಂಗ್
  • ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್
  • ಮೆಕ್ಯಾನಿಕಲ್ ಇಂಜಿನಿಯರಿಂಗ್
  • ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ದೇವದುರ್ಗನಲ್ಲಿ ಈ ಕೆಳಕಂಡ ಕೋರ್ಸ್‌ಗಳು ನೀಡಲಾಗುತ್ತಿದೆ :

  • ಸಿವಿಲ್ ಇಂಜಿನಿಯರಿಂಗ್
  • ಮೆಕ್ಯಾನಿಕಲ್ ಇಂಜಿನಿಯರಿಂಗ್
  • ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್
  • ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್