ಮುಚ್ಚಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಇಲಾಖೆಯ ಚಟುವಟಿಕೆಗಳು

  • ಸರ್ಕಾರದ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು.
  • ಮುದ್ರಣ ಹಾಗೂ ಎಲೆಕ್ಟಾçನಿಕ್ ಮಾಧ್ಯಮಗಳ ಮೂಲಕ ಪತ್ರಿಕಾ ಪ್ರಕಟಣೆಯನ್ನು ಉಚಿತವಾಗಿ ಬಿಡುಗಡೆ ಮಾಡುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳನ್ನು ಈ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವುದು.
  • ಅವರಿಗೆ ಇಲಾಖೆ ವತಿಯಿಂದ ನೀಡಲಾಗುವ ಮಾಧ್ಯಮ ಮಾನ್ಯತಾ ಕಾರ್ಡ್, ಸ್ಮಾರ್ಟ್ ಕಾರ್ಡ್, ರೈಲ್ವೆ ಪಾಸ್, ಆರೋಗ್ಯ ಕಾರ್ಡ್ಗಳನ್ನು ಒದಗಿಸಲಾಗುವುದು.
  • ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಿಲ್ಲಾ ಮಟ್ಟದಲ್ಲಿರುವ ಪತ್ರಿಕೆಗಳನ್ನು ಅರ್ಹತೆಗನುಗುಣವಾಗಿ ಅವುಗಳನ್ನು ಜಿಲ್ಲಾ ಮಾಧ್ಯಮ ಪಟ್ಟಿಗೆ ಸೇರ್ಪಡೆ ಮಾಡುವುದು.
  • ಜಿಲ್ಲಾ ಮಟ್ಟದ ಕೇಬಲ್ ಸಮಿತಿ ಸಭೆ ನಡೆಸುವುದು.
  • ಗಾಂಧಿ ಭವನ ನಿರ್ಮಾಣ ಕಾಮಗಾರಿಯನ್ನು ಮೇಲುಸ್ತುವಾರಿ ಮಾಡುವುದು.
  • ಗಾಂಧಿ ಜಯಂತಿ ಆಚರಿಸುವುದು.
  • ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಜಾಹಿರಾತುಗಳನ್ನು ಅರ್ಹತೆಗನುಗುಣವಾಗಿ ಜಿಲ್ಲಾ, ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟç ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುವುದು.