ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳ ಇಲಾಖೆ
ಇಲಾಖೆಯ ಬಗ್ಗೆ
ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳು
ಇಲಾಖೆಯ ಚಟುವಟಿಕೆಗಳು
ಉಚಿತವಾಗಿ ಜಾನುವಾರುಗಳ ಆರೋಗ್ಯ ನಿರ್ವಹಣೆ, ಉಚಿತವಾಗಿ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಪ್ರತಿಬಂಧಕ ಚುಚ್ಚುಮದ್ದು ಹಾಕುವುದು, ಕೃತಕ ಗರ್ಭಧಾರಣೆ ಮಾಡುವುದು, ಜಾನುವಾರುಗಳ ವಿಮೆ ಮಾಡಿಸುವುದು, ಉಚಿತವಾಗಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಸಂದರ್ಭಾನುಸಾರ ವಿತರಣೆ ಮಾಡುವುದು, ತಳಿ ಅಭಿವೃದ್ಧಿಗಾಗಿ ಉತ್ತಮ ದರ್ಜೆಯ ತಳಿಗಳನ್ನು ಜಾನುವಾರು ಕ್ಷೇತ್ರದ ಮುಖಾಂತರ ಸಹಾಯಾನುದಾನದಲ್ಲಿ ನೀಡುವುದು, ಆಧುನಿಕ ಪಶುಸಂಗೋಪನೆಯಲ್ಲಿ ತಂತ್ರಜ್ಞಾನ / ತರಬೇತಿಯನ್ನು ರೈತರಿಗೆ ಹಾಗೂ ಸಿಬ್ಬಂದಿಗೆ ನೀಡುವುದು, ಫಲಾನುಭವಿ ಆಧಾರಿತ ಕಾರ್ಯಕ್ರಮದ ಯೋಜನೆಗಳನ್ನು ಅನುಷ್ಟಾನ ಗೊಳಿಸುವುದು, ಮಾದರಿ ಸಮೀಕ್ಷೆ ಯೋಜನೆ ಹಾಗೂ ರಾಷ್ಟ್ರೀಯ ಜಾನುವಾರು ಗಣತಿ.
ಇಲಾಖೆ ಯೋಜನೆಗಳು / ವೆಬ್ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
- ರಾಜ್ಯ ವಲಯ : ಬಂಜೆರಾಸು ಚಿಕಿತ್ಸಾ ಶಿಬಿರಗಳ ಯೋಜನೆ, ಮೇವು ಅಭಿವೃದ್ಧಿ ಯೋಜನೆ, ಗಿರಿರಾಜ / ದೇಶಿ ಕೋಳಿಮರಿ ವಿತರಣೆ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮ, ಜಾನುವಾರು ವಿಮಾ ಯೋಜನೆ, ಕುರಿ ಸಾಕಾಣಿಕೆ ಯೋಜನೆ, ಪಿಂಜಾರಾಪೋಲ್ ಮತ್ತು ಇತರೆ ಗೋಶಾಲೆಗಳ ನೆರವು ಯೋಜನೆ, ಉಚಿತವಾಗಿ ಮೇವಿನ ಬೀಜದ ಕಿರುಪೊಟ್ಟಣಗಳ ವಿತರಣೆ ಯೋಜನೆ, ಜಲಕೃಷಿ ಮೇವು ಅಭಿವೃದ್ಧಿ ಯೋಜನೆ, ಮೇವು ಕತ್ತರಿಸುವ ಯಂತ್ರ ವಿತರಣೆ ಯೋಜನೆ
- ಕೇಂದ್ರ ವಲಯ : ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ (NADCP), ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆ(NAIP), ಜಾನುವಾರು ವಿಮಾ ಯೋಜನೆ, ಮಹತ್ವಕಾಂಕ್ಷೆ ಜಿಲ್ಲೆಗಳ ಅಭಿವೃದ್ಧಿ ಯೋಜನೆ (ನೀತಿ ಆಯೋಗ)
ಜಾಲತಾಣ : https://ahvs.karnataka.gov.in/
https://dahd.nic.in