ಮುಚ್ಚಿ

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಇಲಾಖೆಯ ಬಗ್ಗೆ

ಪರಿಶಿಷ್ಟ ಪಂಗಡದ ಜನರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವುದು.

ಇಲಾಖೆಯ ಚಟುವಟಿಕೆಗಳು

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ಜನರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು ವಿವಿಧ ಕಾರ್ಯಕ್ರಮ/ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ರಾಜ್ಯ ಮಟ್ಟ

  • ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳು, ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಮತ್ತು ಆಶ್ರಮ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ
  • ಮೆಟ್ರಿಕ್ ಪೂರ್ವ & ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
  • ಎಸ್.ಎಸ್.ಎಲ್.ಸಿ. ಮತ್ತು ಮೆಟ್ರಿಕ್ ನಂತರದ ಪ್ರೋತ್ಸಾಹಧನ
  • ಪ್ರತಿಷ್ಠಿತ ಶಾಲೆಗಳು
  • ಜಿ.ಎನ್.ಎಂ. & ಬಿ.ಎಸ್ಸಿ ನರ್ಸಿಂಗ್ ಮತ್ತು ಅರೆವೈದ್ಯಕೀಯ ತರಬೇತಿ
  • ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ
  • ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳ ವಿವಾಹವಾಗುವ ದಂಪತಿಗಳಿಗೆ ಧನಸಹಾಯ, ಅಂತರ್ಜಾತಿ ವಿವಾಹ, ವಿಧವಾ ಮರುವಿವಾಹ ವಾಗುವವರಿಗೆ ಪ್ರೋತ್ಸಾಹಧನ
  • ಪರಿಶಿಷ್ಟ ವರ್ಗದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ
  • ಪರಿಶಿಷ್ಟ ವರ್ಗದ ಕಾಲೋನಿಗಳಲ್ಲಿ ವಾಲ್ಮೀಕಿ ಭವನ & ಸಮುದಾಯ ಭವನ ನಿರ್ಮಾಣ

ಕೇಂದ್ರ ಮಟ್ಟ

  • ವಿಶೇಷ ಕೇಂದ್ರೀಯ ನೆರವಿನಡಿ ಒದಗಿಸಿದ ಅನುದಾನದಲ್ಲಿ ಪರಿಶಿಷ್ಟ ವರ್ಗದವರಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮಗಳು
  • ಭಾರತ ಸರ್ಕಾರದ ಶಿಷ್ಯವೇತನ