ಮುಚ್ಚಿ

ಜಿಲ್ಲಾ ಆಯುಷ್ ಕಛೇರಿ

ಇಲಾಖೆಯ ಬಗ್ಗೆ

ಆಯುಷ್ : ಎಂದರೆ ಆಯುವೇðದ ವೈದ್ಯಪದ್ಧತಿ, ಯೋಗ ಮತ್ತು ನ್ಯಾಚುರೋಪಥಿ (ಪ್ರಕೃತಿ ಚಿಕಿತ್ಸೆ) ಯುನಾನಿ ಪದ್ಧತಿ ಸಿದ್ಧ ಪದ್ಧತಿ ಹೋಮಿಯೋಪತಿ ಪದ್ಧತಿ ಈ ಐದು ವೈದ್ಯ ಪದ್ಧತಿಗಳನ್ನು ಒಳಗೊಂಡಿರುವುದೇ ಆಯುಷ್ ಇಲಾಖೆ.

ಇಲಾಖೆಯ ಚಟುವಟಿಕೆಗಳು

ರಾಯಚೂರು ಜಿಲ್ಲೆಯಲ್ಲಿ ಆಯುಷ್ ಇಲಾಖೆ ಅಡಿಯಲ್ಲಿ 12 ಆಯುವೇðದ ಚಿಕಿತ್ಸಾಲಯಗಳು, 5 ಯುನಾನಿ ಚಿಕಿತ್ಸಾಲಯಗಳು ಹಾಗೂ 01 ಹೋಮಿಯೋಪತಿ ಚಿಕಿತ್ಸಾಲಯ ಕಾರ್ಯನಿವðಹಿಸುತ್ತಿವೆ. ಮಾನ್ವಿ ಪಟ್ಟಣದಲ್ಲಿ ಒಂದು ಯುನಾನಿ 06 ಹಾಸಿಗೆಗಳುಳ್ಳ ಆಸ್ಪತ್ರೆ. ರಾಯಚೂರು ನಗರದಲ್ಲಿ ಒಂದು 10 ಹಾಸಿಗೆಗಳುಳ್ಳ ಯುನಾನಿ ಆಸ್ಪತ್ರೆ, ಒಂದು 15 ಹಾಸಿಗೆಗಳುಳ್ಳ ಆಯುವೇðದ ಆಸ್ಪತ್ರೆ ಮತ್ತು ಜಿಲ್ಲಾ ಸಾವðಜನಿಕ ಆಸ್ಪತ್ರೆಯಲ್ಲಿ ಆಯುವೇðದ ಪಂಚಕಮð ಘಟಕ ಹಾಗೂ ದೇವದುಗð ತಾಲ್ಲೂಕ ಆಸ್ಪತ್ರೆಯಲ್ಲಿ ಒಂದು 10 ಹಾಸಿಗೆಗಳುಳ್ಳ ಆಯುವೇðದ ಆಸ್ಪತ್ರೆ ಮತ್ತು ಲಿಂಗಸೂಗೂರು ತಾಲ್ಲೂಕ ಆಸ್ಪತ್ರೆಯಲ್ಲಿ ಒಂದು 10 ಹಾಸಿಗೆಗಳುಳ್ಳ ಆಯುವೇðದ ಆಸ್ಪತ್ರೆ ಕಾಯðನಿವðಹಿಸುತ್ತಿದ್ದು ಸಾವðಜನಿಕರಿಗೆ ಆಯುವೇðದ, ಯುನಾನಿ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಯ ಸೇವೆಯನ್ನು ಒಟ್ಟು 24 ಕೇಂದ್ರಗಳಲ್ಲಿ ಒದಗಿಸುತ್ತಿವೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ನಿದೇðಶನಾಲಯದ ಆದೇಶದ ಮೇರೆಗೆ ರಾಜ್ಯ ಅನುದಾನದಲ್ಲಿ ಆಯುಷ್ ಅರಿವು ಕಾಯðಕ್ರಮದಡಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಾಗೂ ಸಾಮಾನ್ಯ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಹಂಚಿಕೆಯಾದ ಕಾಯðಕ್ರಮವನ್ನು ನಿಯಮಾನುಸಾರ ಆಯೋಜಿಸಲಾದ ಈ ಕೆಳಕಂಡ ಕಾಯðಕ್ರಮಗಳನ್ನು ಮಾಡಲಾಗುತ್ತಿದ್ದೆ.

  • ಆರೋಗ್ಯ ಶಿಬಿರಗಳು
  • ಮನೆ ಮದ್ದು ಕಾಯðಕ್ರಮಗಳು
  • ಜಿಲ್ಲಾ ಮಟ್ಟದ ಆಯುಷ್ ಸೆಮಿನಾರ್ / ವಕðಷಾಪ್
  • ತಾಲ್ಲೂಕ ಮಟ್ಟದ ಆಯುಷ್ ಸೆಮಿನಾರ್/ ವಕðಷಾಪ್