ಮುಚ್ಚಿ

ಗ್ರಾಮ ಲೆಕ್ಕಿಗರು

ರಾಯಚೂರು ಜಿಲ್ಲೆ – ಗ್ರಾಮ ಲೆಕ್ಕಿಗರು (ವಿಲೇಜ್ ಅಕೌಂಟೆಂಟ್)

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ ರ ಮೇರೆಗೆ ಪ್ರತಿಯೊಂದು ಗ್ರಾಮ ಅಥವಾ ಗ್ರಾಮಗಳ ಸಮೂಹಕ್ಕಾಗಿ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶಕ್ಕೆ ಒಳಪಟ್ಟು ಗ್ರಾಮ ಲೆಕ್ಕಾಧಿಕಾರಿಯವರನ್ನು ನೇಮಕ ಮಾಡುತ್ತಾರೆ.

ಗ್ರಾಮ ಲೆಕ್ಕಿಗರು ತಹಶೀಲ್ದಾರ್ ರವರ ಮೇಲ್ವಿಚಾರಣೆ ಯಲ್ಲಿ ಕೆಲಸ ನಿರ್ವಹಿಸುತ್ತಾರೆ ಮತ್ತು ಗ್ರಾಮಕ್ಕೆ ಸಂಬಂದಿಸಿದ ದಾಖಲೆ ಗಳ ನಿರ್ವಹಣೆ ಗೆ ಜವಾಬ್ದಾರರಾಗಿರುತ್ತಾರೆ .

ಕಂದಾಯ ವಸೂಲಿ, ಜನನ ಮರಣಗಳ ನೋಂದಣಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ವರದಿ ನೀಡುವುದು, ಜಾತಿ / ಆದಾಯ ಪತ್ರ ನೀಡುವ ಬಗ್ಗೆ ವರದಿ ನೀಡುವುದು , ಪಡಿತರ ಚೀಟಿ ವಿತರಣೆ , ಸಾರ್ವಜನಿಕರಿಗೆ ಇತರೆ ಇಲಾಖೆಗೆ ಗ್ರಾಮ ಮಟ್ಟದ ಅಂಕಿ ಅಂಶಗಳ ಪ್ರಾರಂಭಿಕ ದಾಖಲೆ ಮಾಹಿತಿ ನೀಡುವುದು , ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಿಗರಿಗೆ ಗ್ರಾಮ ಸಹಾಯಕರು ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ಕಂದಾಯ ಇಲಾಖೆಯ ಕಾರ್ಯ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು, ಗ್ರಾಮ ಲೆಕ್ಕಿಗರ ಕಂದಾಯ ವಸೂಲಾತಿ ಒಂದು ಪ್ರಮುಖ ಕಾರ್ಯವೆಂದು ಪರಿಗಣಿಸಿದ್ದರೂ, ಗ್ರಾಮೀಣ ಜನಸಂಖ್ಯೆಯ ಪರಿಸ್ಥಿತಿಗಳ ಸುಧಾರಣೆಗೆ ಸರ್ಕಾರವು ಪ್ರಾರಂಭಿಸಿದ ಹಲವು ಕಾರ್ಯಕ್ರಮಗಳ ಅಡಿಯಲ್ಲಿ ಫಲಾನುಭವಿಗಳ ಗುರುತಿಸುವಿಕೆಗೆ ಪ್ರಮುಖ ಪಾತ್ರ ವಾಗಿರುತ್ತದೆ.