ಮುಚ್ಚಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಇಲಾಖೆಯ ಬಗ್ಗೆ

ಕರ್ನಾಟಕ ಸರ್ಕಾರವು, ದಿನಾಂಕ ೨೧.೯.೧೯೭೪ ರಂದು, ಜಲಮಾಲಿನ್ಯ ನಿವಾರಿಸಲು ಮತ್ತು ನಿಯಂತ್ರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು, ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ,೧೯೭೪ ಅಡಿಯಲ್ಲಿ ರಚಿಸಿತು. ಜಲ ಕಾಯ್ದೆ ಅಡಿಯಲ್ಲಿ, ಜಲಮಾಲಿನ್ಯ, ನಿಯಂತ್ರಣ ಮತ್ತು ನಿರ್ವಹಣೆ ಹಾಗು ನೀರಿನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ, ೧೯೮೧ ರಚನೆಯ ನಂತರ ಸದರಿ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಮಂಡಳಿಗೆ ವಹಿಸಲಾಯಿತು. ಈ ನಿಟ್ಟಿನಲ್ಲಿ ಮಂಡಳಿಯನ್ನು ೧೯೮೫ ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಂದು ಮರು ನಾಮಕರಣ ಮಾಡಲಾಯಿತು.ತದನಂತರ ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ ೧೯೮೧ ಹಾಗೂ ಪರಿಸರ (ಸಂರಕ್ಷಣೆ) ಕಾಯ್ದೆ, ೧೯೮೬ರ ಅಡಿಯಲ್ಲಿ ಹಲವಾರು ನಿಯಮಗಳನ್ನು ಹಾಗೂ ಅಧಿಸೂಚನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಮಂಡಳಿಗೆ ನೀಡಲಾಯಿತು.

ಇಲಾಖೆಯ ವೆಬ್‌ಸೈಟ್: https://kspcb.karnataka.gov.in/kn