ಮುಚ್ಚಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತ

ಇಲಾಖೆಯ ಬಗ್ಗೆ

ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರು ಮತೀಯ ಅಲ್ಪಸಂಖ್ಯಾತರ ವ್ಯಾಪ್ತಿಗೆ ಸೇರಿರುತ್ತಾರೆ. ಇವರಲ್ಲಿ ಬಹುಪಾಲು ಜನರು ಬಡತನದ ರೇಖೆಯ ಕೆಳಗೆ ಸುತ್ತುತ್ತಿದ್ದು, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಚಿಂತಾಜನಕವಾಗಿದ್ದು, ಅವರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಾಲಸೌಲಭ್ಯವನ್ನು ಒದಗಿಸಲಾಗುತ್ತದೆ. ರಾಜ್ಯದ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಏಕೈಕ ಉದ್ದೇಶವಾಗಿದೆ.

ಇಲಾಖೆಯ ಚಟುವಟಿಕೆಗಳು

ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಅಲ್ಪಸಂಖ್ಯಾತರ ಜನರಿಗೆ ಒದಗಿಸಲಾಗುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  1. ಸ್ವಯಂ ಉದ್ಯೋಗ ಯೋಜನೆ
  2. ಅರಿವು ಶೈಕ್ಷಣಿಕ ಸಾಲ
  3. ಶ್ರಮಶಕ್ತಿ ಸಾಲ ಯೋಜನೆ
  4. ಮೈಕ್ರೋಲೋನ್ ಯೋಜನೆ
  5. ಗಂಗಾ ಕಲ್ಯಾಣ ನೀರಾವರಿ ಯೋಜನೆ
  6. ಭೂ ಒಡೆತನ ಯೋಜನೆ
  7. ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ಸಹಾಯಧನ
  8. ವೃತ್ತಿ ಸಹಾಯಧನ ಯೋಜನೆ
  9. ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ದಿ ಮತ್ತು ಹಣಕಾಸು ನಿಗಮ (ದೆಹಲಿ) ಯೋಜನೆ

      http://kmdc.karnataka.gov.in       

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

      http://kmdc.karnataka.gov.in